Shivamurthy-Keelara

 

ಕನ್ನಡ ಬಂಧುಗಳೇ..

ಹೊರನಾಡಿನ ಅತಿ ದೊಡ್ಡ ಸಂಸ್ಥೆಯಾದ “ಅಕ್ಕ” ಅಮೇರಿಕನ್ನಡಿಗರ ಆಶೋತ್ತರಗಳನ್ನು, ಕನ್ನಡ ನಾಡಿನ ನಡೆ, ನುಡಿ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸಕಾರಾತ್ಮಕವಾಗಿ ಸ್ಪಂದಿಸುವ ಸಂಸ್ಥೆ.

ಅಕ್ಕ ಹೆಸರೇ ಹೇಳುವಂತೆ ಅಮೆರಿಕ ಕನ್ನಡ ಕೂಟಗಳ ಹೆಮ್ಮೆಯ ಹಿರಿಯ ಸಂಸ್ಥೆ. ಅಮೆರೆಕನ್ನಡಿಗರ ತಾಯ್ನಾಡಿನ ಸಂಸ್ಕ್ರತಿ ಹಾಗು ಭಾವನೆಗಳನ್ನು ಉಳಿಸಿ ಬೆಳೆಸುವಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆಗಳನ್ನು ಕಳೆದ ಕೆಲವು ದಶಕಗಳಿಂದ ಹಲವಾರು ನಾಯಕರ ಮಾರ್ಗದರ್ಶನದಲ್ಲಿ ನೀಡುತ್ತಾ “ಹಿರಿಯ ಅಕ್ಕ”ನಾಗಿ ವಿಶ್ವದಲ್ಲೇ ಮನ್ನಣೆ ಗಳಿಸಿದೆ.

ಕಳೆದ ಇಪ್ಪತ್ತು ವರ್ಷಗಳಿಂದ ಉತ್ತರ ಅಮೇರಿಕದಲ್ಲಿನ ಕನ್ನಡಿಗರ ಮತ್ತು ಕರ್ನಾಟಕದ ಪ್ರತಿಭಾನ್ವಿತರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಯೋಗ್ಯವಾದ ವೇದಿಕೆಗಳನ್ನು “ಅಕ್ಕ” ಒದಗಿಸುತ್ತಿದೆ.

ಕನ್ನಡ ಮತ್ತು ಕರ್ನಾಟಕದ ಸಂಸ್ಕ್ರತಿಯ ಬೆಳವಣಿಗೆಯ ಆಶಯ ಹೊತ್ತಿರುವ ಇಂತಹ ಸಂಸ್ಥೆಯನ್ನು ಮುನ್ನಡೆಸುವ ಹೊಣೆಯನ್ನು ‘ಅಕ್ಕ’ ಹೊಂದಿದೆ. ಸಾಮಾಜಿಕ ಕಳಕಳಿಯನ್ನು ಹೊಂದಿರುವ ಅಕ್ಕ ಅಮೆರಿಕನ್ನಡಿಗರೊಂದಿಗೆ, ಕಳಕಳಿ‌ ಹೊಂದಿರುವ ಕನ್ನಡಾಭಿಮಾನಿಗಳ ಒಡಗೂಡಿ ವಿವಿಧ ಸ್ತರದ ಜನರನ್ನು ತಲುಪುವ ಹಿರಿಯ ಸಂಸ್ಥೆಯಾಗಿ ಉನ್ನತಮಟ್ಟದ ಸಾಮಾಜಿಕ ಹಾಗು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಎಲ್ಲರ ಸಲಹೆ ಸಹಕಾರಗಳಿರಲಿ….
ಕನ್ನಡ ಸೇವೆಯ ಆಕಾಂಕ್ಷೆ, ಭರವಸೆಗಳೊಂದಿಗೆ..

-ಶಿವಮೂರ್ತಿಕೀಲಾರ‌ ಮತ್ತು ಕಾರ್ಯಕಾರಿ ಸಮಿತಿ