×

Error message

  • Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
  • Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
  • Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
  • Deprecated function: The each() function is deprecated. This message will be suppressed on further calls in _menu_load_objects() (line 569 of /home4/mipampao/public_html/akkaonline/2014/includes/menu.inc).
  • Deprecated function: implode(): Passing glue string after array is deprecated. Swap the parameters in drupal_get_feeds() (line 394 of /home4/mipampao/public_html/akkaonline/2014/includes/common.inc).

Co-Convener - Raghu Halur


ಕನ್ನಡ        English

ಸಿರಿಗನ್ನಡಂ ಗೆಲ್ಗೆ!

ಯಾವುದೇ ಸಮಯದಲ್ಲಾಗಲಿ, ಯಾವುದೇ ಸ್ಥಳದಲ್ಲಾಗಲಿ, ಕನ್ನಡಕ್ಕೆ ಸಂಬಂಧಿಸಿದ ವಿಷಯ ಎಂದಾಕ್ಷಣ, ಕನ್ನಡಿಗರ ಹೃದಯದಲ್ಲಿ ಉಲ್ಲಾಸದ ಮಿಂಚು ಹರಿಯುತ್ತದೆ. ಪ್ರಯಾಣಿಸುವಾಗ, ಸ್ಥಳೀಯ ರೈಲು ಹಾಗು ಬಸ್ಸು ನಿಲ್ದಾಣಗಳಲ್ಲಿ ಸ್ವಲ್ಪವೇ ಕನ್ನಡದ ಮಾತುಗಳು ಕಿವಿಗೆ ಬಿದ್ದರೂ ಸಾಕು, ಆಗುವ ಸಂತೋಷ ಅಪಾರ! ಅಂದ ಮೇಲೆ, ವಿಶ್ವಾದ್ಯಂತ ಸಾವಿರಾರು ಕನ್ನಡಿಗರು ನಮ್ಮ ಸಮುದಾಯದಲ್ಲಿ ಆಗಿರುವ ಸಾಧನೆಗಳನ್ನು ಯಶಸ್ವಿಯಾಗಿ ಆಚರಿಸಲು ಹಾಗು ಇನ್ನೂ ಹೆಚ್ಚಿನ ಯಶಸ್ಸನ್ನು ಗಳಿಸುವ ಸಂಕಲ್ಪವನ್ನು ಮಾಡಲು ಒಂದು ಕಡೆ ಸೇರುತ್ತಿದ್ದಾರೆ ಎಂದರೆ, ಆಗುವ ಸಂತೋಷ, ಸಂಭ್ರಮವನ್ನ ನೀವೇ ಊಹಿಸಿ!

ಈ ಪ್ರೇರಣೆಯಿಂದಲೇ “ಸಾಧನೆ, ಸಂಭ್ರಮ, ಸಂಕಲ್ಪ’ ಎಂಬ ಘೋಷಣೆ ರೂಪಗೊಂಡು, ೮ನೇ ಅಕ್ಕ ಸಮ್ಮೇಳನದ ಉದ್ಘೋಷಣೆಯಾಗಿದೆ. ಸಾವಿರಾರು ’ಕನ್ನಡ ಅಭಿಮಾನಿಗಳು’ – ಕಲೆಯನ್ನು ಪ್ರೀತಿಸುವವರು, ವಿದ್ವಾಂಸರು, ಕಾರ್ಯಕ್ರಮಗಳ ನಿರ್ದೇಶಕರು, ಕಲಾವಿದರು, ವ್ಯವಹಾರಸ್ಥರು, ಉದ್ದಿಮೆಗಾರರು, ಶಿಕ್ಷಕ-ಶಿಕ್ಷಕಿಯರು, ಪೋಷಕರು, ಯುವಕರು – ಎಲ್ಲಾ ಕ್ಷೇತ್ರದವರು ಕಾರ್ಮಿಕ ದಿನಾಚರಣೆಯ ಮೂರು ದಿನಗಳ ಧೀರ್ಘ ವಾರಾಂತ್ಯದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಸೇರಿ, ಕನ್ನಡವನ್ನು ಪೂಜಿಸಲಿದ್ದಾರೆ. ಸಮ್ಮೇಳನಕ್ಕೆ ಬರಲು ಒಬ್ಬೊಬ್ಬರಿಗೂ ಒಂದೊಂದು ರೀತಿಯ ಪ್ರೇರಣೆ- ಕೆಲವರಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿವುದು, ಕಾರ್ಯಕ್ರಮಗಳನು ನೋಡುವುದು ಎಂದಾದರೆ, ಇನ್ನು ಕೆಲವರಿಗೆ ಸುಪ್ರಸಿದ್ಧ ವ್ಯಕ್ತಿಗಳನ್ನು ಭೇಟಿಮಾಡುವುದು, ಮತ್ತೂ ಕೆಲವರಿಗೆ ತಮ್ಮ ಕಾಲೇಜಿನ ಸಹಪಾಠಿಗಳನ್ನು ಭೇಟಿ ಮಾಡುತ್ತೇವೆ ಎಂಬ ಸಂಗತಿ ಪ್ರೇರೇಪಿಸಿರುತ್ತದೆ. ಆದರೆ ಪ್ರೇರಣೆ ಏನೇ ಆಗಿದ್ದರೂ, ಪ್ರಯಾಣದ ಗುರಿ ಒಂದೇ- ಗತವೈಭವವನ್ನು ನೆನೆದು ಹೆಮ್ಮೆ ಪಡುವುದು, ಈಗಿನದನ್ನು ನವಶೈಲಿಯಲ್ಲಿ ಸಂಭ್ರಮಿಸುವುದು, ಮುಂದಿನದಕ್ಕೆ ಅಡಿಪಾಯ ಹಾಕಿ ದಾರಿ ಮಾಡುವುದು.

ಕೆ ಕೆ ಎನ್ ಸಿ ಯ ಸದಸ್ಯರಾದ ನಮಗೆ, ’ಸಾಧಿಸು, ಶ್ಲಾಘಿಸು, ಉದ್ಧರಿಸು” ರೀತಿಯ ಚಿತ್ರಕಥೆಯ ಫಲಕ ಕಟ್ಟಲಿಕ್ಕೆ ಇದೊಂದು ಅಮೋಘ ಅವಕಾಶ. ಅಮೇರಿಕಾದ್ಯಂತ ಇರುವ ಕನ್ನಡಿಗರಲ್ಲಿ ಅನೇಕ ಉತ್ತಮ ಕಥೆಗಾರರಿದ್ದಾರೆ. ಹಾಡು, ನಾಟಕ, ಬರಹ, ನಿರ್ವಾಹಣೆ, ನೃತ್ಯ, ಕಲೆಗಳ ಮೂಲಕ ಕುತೂಹಲಕರವಾದ ರಂಜಿಸುವಂಥ ಕಥೆಗಳನ್ನು ಹೇಳುವಂತಹ ಸಾಮರ್ಥ್ಯವನ್ನ ಉಳ್ಳವರಿದ್ದಾರೆ. ಈ ಸಮ್ಮೇಳನದಲ್ಲಿ ಇಂತಹವರಿಗೆ ಒಂದು ಒಳ್ಳೆಯ ವೇದಿಕೆಯನ್ನು ಒದಗಿಸಿಕೊಡಬೇಕೆಂಬುದೇ ನಮ್ಮ ಆಸೆ, ಅವರೆಲ್ಲರೂ ತಮ್ಮ ಪ್ರತಿಭೆಗಳಿಂದ ಪ್ರತಿಯೊಬ್ಬ ಕನ್ನಡಿಗನ್ನನ್ನು ಹೆಮ್ಮೆ ಪಡಿಸುವುದರಲ್ಲಿ ಸಂಶಯವಿಲ್ಲ.

ಸುಮಾರು ೭೫ ಸದಸ್ಯರುಗಳಿಂದ ಕೂಡಿರುವ ಮನೋರಂಜನಾ ತಂಡವು ಕಾರ್ಯಕ್ರಮಗಳಲ್ಲಿ ಹೊಸತನವನ್ನೂ, ನಿರ್ವಾಹಣೆಯಲ್ಲಿ ಶಿಸ್ತನ್ನು ತರಲು ಬಹಳಷ್ಟು ಶ್ರಮಪಡುತ್ತಿದೆ. ಅವರ ಚಿತ್ರಕಥೆಯ ಫಲಕವು ನಿಮ್ಮ ಅತ್ಯಂತ ಉತ್ತಮವಾದ ಕಾರ್ಯಕ್ರಮಗಳಿಂದ ಸಿಂಗಾರಗೊಳ್ಳಬೇಕೆಂದರೆ ನಿಮ್ಮ ಸಹಾಕಾರ ಅತ್ಯಗತ್ಯ. ಪೂರ್ಣವಾದ, ಸರಿಯಾದ ಮಾಹಿತಿ ದೊರಕಿಸಿ, ಪ್ರತಿಯೊಬ್ಬರೂ ಸಮ್ಮೇಳನಕ್ಕೆ ಬಂದು, ಪ್ರತಿಯೊಬ್ಬರೂ ಕನ್ನಡದ ರಾಯಭಾರಿ ಆಗುವಂತೆ ಮಾಡಲು ನಮ್ಮ ಪ್ರಚಾರ ತಂಡ ಸಾಕಷ್ಟು ಕೆಲಸ ಮಾಡುತ್ತಿದೆ. ನಮ್ಮ ಇನ್ನೊವೇಷನ್ ತಂಡ ಮೊಬೈಲ್ ಆಪ್ಸ್, ಅನಿಮೇಶನ್, ಹೈ-ಟೆಕ್ ವಿಡಿಯೋಗಳನ್ನು ಮಾಡುವುದರಲ್ಲಿ ಕಾರ್ಯನಿರತರಾಗಿದ್ದಾರೆ. ನಿಮ್ಮ ಅನಿಸಿಕೆಗಳನ್ನು ತಿಳಿದುಕೊಳ್ಳುವುದಕ್ಕಾಗಿ ಕಾಯುತ್ತಿದ್ದಾರೆ. ಸ್ಮರಣಸಂಚಿಕೆ ತಂಡದವರು ಸಿಹಿ ನೆನಪುಗಳ ಒಂದು ನಿಧಿಯ ಪೆಟ್ಟಿಗೆಯನ್ನು ಜೋಡಿಸುವುದರಲ್ಲಿ ಮಗ್ನರಾಗಿದ್ದಾರೆ. ನೀವು ಪೂರ್ಣ ಮನಸ್ಸಿನಿಂದ ಸಮ್ಮೇಳನದಲ್ಲಿ ಭಾಗವಹಿಸಿದರೆ, ನಿಮ್ಮ ಅತ್ಯಮೂಲ್ಯವಾದ ಒಡವೆಗಳನ್ನೇ ಸಮರ್ಪಿಸಿದಂತೆ!

ಈ ಸಮ್ಮೇಳನವು ಅತ್ಯಂತ ಯಶಸ್ವಿಯಾಗಲು, ವ್ಯವಸ್ಥಾ ತಂಡ, ಊಟೋಪಚಾರದ ತಂಡ, ಸಾಹಿತ್ಯ ಮತ್ತು ಇನ್ನೂ ಅನೇಕ ತಂಡಗಳು ಪರಿಶ್ರಮಪಡುತ್ತಿವೆ. ೧೫-೨೫ ವಯಸ್ಸಿನ ಯುವಕರಿಗೆ ಈ ಸಮ್ಮೇಳನವು ಯಾವ ರೀತಿಯಲ್ಲಿ ಹೆಚ್ಚು ಉಪಯುಕ್ತವಾಗುವಂತೆ ಮಾಡಬಹುದು ಎಂಬ ದಿಶೆಯಲ್ಲಿ ಸಂಶೋಧನಾ ಕಾರ್ಯಗಳು ನಡೆಯುತ್ತಿವೆ.
ನಾವು ಎಷ್ಟೇ ಶ್ರದ್ಧೆ ಹುಮ್ಮಸ್ಸಿನಿಂದ ಪ್ರಯತ್ನಪಟ್ಟರೂ, ಕೊನೆಗೆ ಈ ಸಮ್ಮೇಳನದ ಯಶಸ್ಸು ಶ್ರೇಯಸ್ಸು ನಮಗೆ ಗೊತ್ತೇ ಇರದಂತ ಹಲವಾರು ಅಂಶಗಳ ಮೇಲೆ ಅವಲಂಬಿಸಿರುತ್ತದೆ! ಆದರೆ ನಿಮ್ಮ ಆತಿಥ್ಯವನ್ನ ನಾವು ಎಷ್ಟರಮಟ್ಟಿಗೆ ಚೆನ್ನಾಗಿ ಮಾಡಬಹುದು ಎಂಬುದು ನಮ್ಮ ಕೈಯಲ್ಲಿ ಇದೆ. ಇಡೀ ಕೆ ಕೆ ನ್ ಸಿ ಯ ಸಮುದಾಯ ನಿಮ್ಮ ಬರುವಿಕೆಯನ್ನೇ ಕಾಯುತ್ತಿದೆ; ಈ ಸಮ್ಮೇಳನವನ್ನು “ಒಂದು ದೊಡ್ಡ ಕನ್ನಡ ಕುಟುಂಬದ ಮಿಲನ” ವನ್ನಾಗಿ ಮಾಡಲು ನಿಮಗಾಗಿ ಎದಿರು ನೋಡುತ್ತಿದೆ. ಈ ಸಮ್ಮೇಳನದಲ್ಲಿ ಹೊಸದಾಗಿ ಆದ ಪ್ರತಿ ಗೆಳಯ ಗೆಳತಿಯರು ನಮಗೆ ಅಪೂರ್ವ ರತ್ನವಿದ್ದಂತೆ! ಅಂದರೆ, ಈ ಸಮ್ಮೇಳನವು ಮುಗಿಯುವ ಹೊತ್ತಿಗೆ ನಾವು ಕೋಟ್ಯಾಧೀಶ್ವರು ಆಗುತ್ತೇವೆ ಎನ್ನಬಹುದು!

ಸಮ್ಮೇಳನದಲ್ಲಿ ಸಿಕ್ಕಾಗ ಬಿಡುವಿಲ್ಲದಿದ್ದರೂ (ನಾವೂ- ನೀವೂ) ಕೈಕುಲಕಲು, ನಮಸ್ಕಾರ ಹೇಳಲು, ಹಲೋ ಹೇಳಲು ಮರೆಯಬೇಡಿ. ಅಕ್ಕ ಸಮ್ಮೇಳನಕ್ಕೆ ಬರುವುದು ಮಾತ್ರವಲ್ಲದೆ, ಸಂಪೂರ್ಣ ಭಾಗಿಯಾಗಿ- ಅಲ್ಲಿರುವ ಚೈತನ್ಯವನ್ನ ಆಸ್ವಾದಿಸಿ, ನಿಮ್ಮ ಆತ್ಮವನ್ನು ಸಂಪೂರ್ಣವಾಗಿ ತೊಡಗಿಸಿ, ಇನ್ನಿತರನ್ನೂ ಉತ್ತೇಜಿಸಿ!


ವಿಶ್ವಾಸದೊಂದಿಗೆ,

ರಘು ಹಾಲೂರು

ಸಹ-ಸಂಚಾಲಕರು, ಎಂಟನೆಯ ಅಕ್ಕ ವಿಶ್ವ ಕನ್ನಡ ಸಮೇಳನ - 2014