Error message
- Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
- Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
- Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
- Deprecated function: The each() function is deprecated. This message will be suppressed on further calls in _menu_load_objects() (line 569 of /home4/mipampao/public_html/akkaonline/2014/includes/menu.inc).
- Deprecated function: implode(): Passing glue string after array is deprecated. Swap the parameters in drupal_get_feeds() (line 394 of /home4/mipampao/public_html/akkaonline/2014/includes/common.inc).
Convener - Suresh Babu
ಆತ್ಮೀಯ ಕನ್ನಡಿಗರೇ!
ಕನ್ನಡಕೂಟ ಉತ್ತರ ಕ್ಯಾಲಿಫೋರ್ನಿಯ(KKNC) ವತಿಯಿಂದ ನಮಸ್ಕಾರ.
ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
೮ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವು ಬೇ ಏರಿಯಾದ ಸ್ಯಾನ್ ಫ್ರಾನ್ಸಿಸ್ಕೋ ಮಹಾನಗರದಲ್ಲಿ ನಡೆಯುತ್ತಿರುವುದು ನಮ್ಮ ಸೌಭಾಗ್ಯವೆಂದು ಭಾವಿಸಿದ್ದೇವೆ. ಈ ಮಹೋತ್ಸವವು ಬರುವ Labor Day weekendನಲ್ಲಿ ಅಂದರೆ ಆಗಸ್ಟ್ 29,30,31 ರಂದು `San Jose McEnery Convention Center' ನಲ್ಲಿ ನಡೆಯಲಿದೆ. ಅಕ್ಕ ಸಂಸ್ಥೆಯು ಸ್ಥಾಪನೆಯಾದಾಗಿನಿಂದಲೂ ಅಮೇರಿಕಾ ಕನ್ನಡಿಗರ ಏಳಿಗೆ, ಸಂಸ್ಕೃತಿ, ಭಾಷೆ , ಇತಿಹಾಸ, ಪರಂಪರೆ ಹಾಗು ಆಸಕ್ತಿಗಾಗಿ ಶ್ರಮವಹಿಸಿ ದುಡಿಯುತ್ತಿದೆ. ಅಕ್ಕ ಸಂಸ್ಥೆಯು ಹೊಸತೆರನಾದ ಈ ವಿಭಿನ್ನ ರೀತಿಯ ಸಮ್ಮೇಳನವನ್ನು ಮೊಟ್ಟ ಮೊದಲನೆಯ ಬಾರಿಗೆ ಕರ್ನಾಟಕ/ಭಾರತದ ಹೊರಗೆ ನಡೆಸಿದ್ದಲ್ಲದೇ ಏಳು ಬಾರಿ ಈ ಸಮ್ಮೇಳವನ್ನು ಉತ್ತರ ಅಮೇರಿಕಾದ ಬೇರೆ ಬೇರೆ ಏಳು ಕಡೆಗಳಲ್ಲಿ ನಡೆಸಿ ಯಶಸ್ವಿಯಾಗಿಸಿರುವುದು `ಅಕ್ಕ' ಸಂಸ್ಥೆಯ ಹೆಗ್ಗಳಿಕೆಯಾಗಿದೆ.
೮ನೇ ಬಾರಿ ಈ ಸಮ್ಮೆಳನವು ಕ್ಯಾಲಿಫೋರ್ನಿಯಾದ ಬೇ ಏರಿಯಾದಲ್ಲಿ ನಡೆಯುತ್ತಿರುವುದು ಕೆ ಕೆ ಎನ್ ಸಿ ಯ ಅದೃಷ್ಟ. ಅಮೇರಿಕದಲ್ಲೇ ಅತಿ ದೊಡ್ಡ ಕನ್ನಡ ಕೂಟಗಳಲ್ಲಿ ಒಂದಾಗಿರುವ ಕೆ ಕೆ ಎನ್ ಸಿ ಯು ಉತ್ತಮ ಪ್ರತಿಭೆ ಹಾಗೂ ಭರ್ಜರಿ ಕಾರ್ಯಕ್ರಮ ಕೊಡಬಲ್ಲ ಅನುಭವ ಹೊಂದಿದೆ. `ಅಕ್ಕ' ಸಮ್ಮೇಳನವು ಮೊದಲನೆಯ ಬಾರಿಗೆ ಅಮೇರಿಕಾದ ಪಶ್ಚಿಮ ಭಾಗದಲ್ಲಿ ನಡೆಯುತ್ತಿರುವುದು ಬೇ ಏರಿಯಾದ ಜನರಿಗೆ ಬಹಳ ಹರುಷ ತಂದಿದೆ. ಈ ಮೂರು ದಿನಗಳ ಅದ್ಧೂರಿ ಕಾರ್ಯಕ್ರಮವನ್ನು ಕನ್ನಡದ ಜನತೆಗೆ ನೀಡಲು ಉತ್ಸಾಹದಿಂದ ಎದುರು ನೋಡುತ್ತಿದ್ದೇವೆ.
ನಮ್ಮ ಸಮ್ಮೇಳನದ ಶಿರ್ಷೆಕೆ `ಸಾಧನೆ, ಸಂಭ್ರಮ, ಸಂಕಲ್ಪ'. ವಿಶ್ವದಲ್ಲೇ ಕನ್ನಡಿಗರು ಹಲವಾರು ಕ್ಷೇತ್ರಗಳಲ್ಲಿ ( ಸಂಸ್ಕೃತಿ, ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಕ್ರೀಡೆ ) ಮಹತ್ತರವಾದ ಸಾಧನೆಗೈದಿದ್ದಾರೆ. ನಮ್ಮ ಸಮ್ಮೇಳನವು ಈ ಸಾಧನೆಗಳನ್ನು ಸಂಭ್ರಮದಿಂದ ಆಚರಿಸಲಿದೆ. ಅದೇ ನಿಟ್ಟಿನಲ್ಲಿ ನಮ್ಮ ಯುವ ಪೀಳಿಗೆ ಇನ್ನೂ ಅತ್ಯುತ್ತಮವಾದ ಪ್ರತಿಭೆಯೊಂದಿಗ ಸಾಧನೆಗಳೊಂದಿಗೆ ಜಗತ್ಪ್ರಸಿದ್ಧವಾಗುವಂತಹ ಅವಕಾಶ ಒದಗಿ ಬಂದಿದೆ. ಈ ಸಮ್ಮೆಳನದಲ್ಲಿ ನಾವು ಯುವ ಪೀಳಿಗೆಯನ್ನು ಹುರಿದುಂಬಿಸುವ ಯೋಜನೆ ಹಮ್ಮಿಕೊಂಡಿದ್ದೇವೆ.
San Francisco ಅಮೇರಿಕಾದ ೫ ಸುಪ್ರಸಿದ್ಧ ಪ್ರವಾಸಿ ತಾಣಗಳಲ್ಲ್ಲಿ ಒಂದು. Golden Gate Bridge, Crooked Street, China Town, Napa valley, Yosemite, Silicon Valley ಇಲ್ಲಿರುವ ಹಲವಾರು ಆಕರ್ಷಣೆಗಳಲ್ಲಿ ಪ್ರಮುಖವಾದವುಗಳು. ಬರುವ ಅತಿಥಿಗಳಿಗೆ ೩ ದಿನಗಳ ಸಮ್ಮೇಳನದ ಜೊತೆಗೆ, ಇಲ್ಲಿನ ಜಗತ್ಪ್ರಸಿದ್ಧ ಆಕರ್ಷಕ ತಾಣಗಳನ್ನು ನೋಡುವ ಸದಾವಕಾಶ ಒದಗಿ ಬಂದಿದೆ.
ಎಲ್ಲಾ ಸಮ್ಮೇಳನಗಳಂತೆ ನಾವು ಕೂಡ ಗುಣಮಟ್ಟದ ಮನೋರಂಜನೆ, ರುಚಿಕರವಾದ ಊಟ-ತಿಂಡಿ ಮತ್ತು ಕಳಂಕರಹಿತ ಆತಿಥ್ಯ ಈ ಎಲ್ಲವುಗಳ ವ್ಯವಸ್ಥೆಯತ್ತ ಹೆಚ್ಚಿನ ಗಮನಹರಿಸುತ್ತೇವೆ. ಇತ್ತೀಚೆಗೆ ರಚಿತವಾದ ನಮ್ಮ ತಂಡ ಈ ಒಂದು ಸಮ್ಮೇಳನವನ್ನು ಸ್ಮರಣೀಯವಾಗಿ ಮಾಡಲು ಸಂಬಂಧಿಸಿದ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಮುನ್ನಡೆಯುತ್ತಿದೆ. ಬರುವ ತಿಂಗಳುಗಳಲ್ಲಿ ನಾವು ವಿವಿಧ ಮಾಧ್ಯಮಗಳ ಮೂಲಕ ಹೆಚ್ಚು ವಿವರಗಳನ್ನು ಒದಗಿಸುತ್ತೇವೆ.
ನಾವು ಆಗಸ್ಟ್ 29, 30 ಮತ್ತು 31ರ ಸಮಯದಲ್ಲಿ San Jose AKKA WKC 2014 ನಿಮ್ಮನ್ನು ಸ್ವಾಗತ ಕೋರಲು ಎದುರುನೋಡುತ್ತಿದ್ದೇವೆ. ತಾವೆಲ್ಲರೂ ನಮ್ಮ ಆಹ್ವಾನ ಹಾಗು ಆತಿಥ್ಯ ಸ್ವೀಕರಿಸಬೇಕೆಂದು ವಿನಂತಿಸುತ್ತೇವೆ.
ವಿಶ್ವಾಸದೊಂದಿಗೆ,
ಸುರೇಶ್ ಬಾಬು
ಸಂಚಾಲಕರು, ಎಂಟನೆಯ ಅಕ್ಕ ವಿಶ್ವ ಕನ್ನಡ ಸಮೇಳನ - 2014