×

Error message

  • Deprecated function: Methods with the same name as their class will not be constructors in a future version of PHP; nodequeue_queue has a deprecated constructor in include_once() (line 1105 of /home4/mipampao/public_html/akkaonline/2014/includes/bootstrap.inc).
  • Deprecated function: Unparenthesized `a ? b : c ? d : e` is deprecated. Use either `(a ? b : c) ? d : e` or `a ? b : (c ? d : e)` in include_once() (line 1105 of /home4/mipampao/public_html/akkaonline/2014/includes/bootstrap.inc).
  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3168 of /home4/mipampao/public_html/akkaonline/2014/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home4/mipampao/public_html/akkaonline/2014/sites/all/modules/ctools/ctools.module).
  • Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
  • Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
  • Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
  • Deprecated function: The each() function is deprecated. This message will be suppressed on further calls in _menu_load_objects() (line 569 of /home4/mipampao/public_html/akkaonline/2014/includes/menu.inc).
  • Deprecated function: implode(): Passing glue string after array is deprecated. Swap the parameters in drupal_get_feeds() (line 394 of /home4/mipampao/public_html/akkaonline/2014/includes/common.inc).

ಕನ್ನಡ ಬರಹಗಾರರಿಗೆಲ್ಲ ನಮಸ್ಕಾರ! ’ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’. ಸಕಲರಿಗೂ ’ಜಯ’ ನಾಮ ಸಂವತ್ಸರದ ಶುಭಾಶಯಗಳು.

ಆಗಸ್ಟ್ ೨೯, ೩೦ ಮತ್ತು ೩೧ ೨೦೧೪ರಂದು ಅಮೇರಿಕದ ಉತ್ತರ ಕ್ಯಾಲಿಫ಼ೋರ್ನಿಯ ಕನ್ನಡ ಕೂಟದ ಆಶ್ರಯದಲ್ಲಿ, ನಡೆಯಲಿರುವ ಎಂಟನೆಯ ’ಅಕ್ಕ ವಿಶ್ವ ಕನ್ನಡ ಸಮ್ಮೇಳನ ೨೦೧೪’  ಕಾರ್ಯಕ್ರಮದ ಅಂಗವಾಗಿ, ನಮ್ಮ ಸಮುದಾಯದ ಸಾಧನೆ-ಸಂಭ್ರಮ-ಸಂಕಲ್ಪಗಳನ್ನು ಕೇಂದ್ರವಾಗಿಟ್ಟುಕೊಂಡು ಒಂದು ಸ್ಮರಣಸಂಚಿಕೆಯನ್ನು ಹೊರತರಬೇಕೆಂದು ನಿಶ್ಚಯಿಸಿದ್ದೇವೆ. ಅತ್ಯಮೂಲ್ಯ ಲೇಖನಗಳನ್ನು, ಸಮಾಜದ ಧುರೀಣರ ಸಂದೇಶಗಳನ್ನು, ಸಾಹಿತ್ಯ ಪ್ರಪಂಚದ ದಿಗ್ಗಜರ ಹಾರೈಕೆಗಳನ್ನೂ,ಸಮ್ಮೇಳನದ ಸವಿನೆನಪುಗಳನ್ನೂ ಹೊತ್ತು ಬರಲಿರುವ ಈ ಅನರ್ಘ್ಯಮಣಿಗಳ ಭಂಡಾರವು ಮತ್ತಷ್ಟು ಉತ್ಕೃಷ್ಟವಾಗಿ ಮೂಡಿ ಬರಲು ನಿಮ್ಮ ಸಹಾಯ ಮತ್ತು ಸಹಕಾರ ಅತ್ಯಗತ್ಯ.

ಸ್ಮರಣಸಂಚಿಕೆಯ ತಂಡದವರಾದ ನಾವು, ಈ ಕರೆಯೋಲೆಯ ಮೂಲಕ ನಮ್ಮ ಈ ಭಂಡಾರವನ್ನು ತುಂಬಿಸಲು ನಿಮ್ಮ ಮುತ್ತಿನಂತಹ ಲೇಖನಗಳನ್ನು ಆಹ್ವಾನಿಸುತ್ತಿದ್ದೇವೆ. ನಿಮ್ಮ ಲೇಖನಗಳು ಕನ್ನಡ ಸಣ್ಣಕಥೆ, ಕವನ, ಹನಿಗವನ, ಪ್ರಬಂಧ, ಪ್ರವಾಸಕಥನ, ಪದಬಂಧ ಇತ್ಯಾದಿ ಯಾವುದೇ ಸಾಹಿತ್ಯ ಪ್ರಕಾರದಲ್ಲಿ ಇರಬಹುದು. ನೀವು ಬರೆದು ಕಳುಹಿಸಲಿರುವ ಲೇಖನಗಳು ಕೆಳಗೆ ನೀಡಿರುವ ನಿಯಮಗಳನ್ನು ಪಾಲಿಸುವಂತೆ ಇರಲಿ ಎಂದು ಕೋರಿಕೊಳ್ಳುತ್ತೇವೆ.

ನಮ್ಮ ಆಹ್ವಾನವನ್ನು ಓದಿದ ನಿಮ್ಮ ಮನಗಳಲ್ಲಿ ಶೀಘ್ರದಲ್ಲೇ ಹೊಸ ಆಲೋಚನೆಗಳು ಮೂಡಿ, ನಿಮ್ಮ ಕೈಗಳು ಲೇಖನಿ/ಕೀಲಿಮಣೆ ಹಿಡಿಯಲಿವೆ ಎಂದು ಆಶಿಸುತ್ತೇವೆ.
- ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಸ್ಮರಣಸಂಚಿಕೆ ತಂಡ

  • ’ಅಕ್ಕ ೨೦೧೪’ರ ಬೀಜಮಂತ್ರವಾದ ‘ಸಾಧನೆ-ಸಂಭ್ರಮ-ಸಂಕಲ್ಪ’ಗಳನ್ನು ಕೇಂದ್ರವಾಗಿಟ್ಟುಕೊಂಡು ಬರೆದ ಲೇಖನಗಳಿಗೆ ಆದ್ಯತೆ ನೀಡಲಾಗುತ್ತದೆ.

  • ನಮಗೆ ಕಳುಹಿಸಲಿರುವ ಲೇಖನಗಳು ಬೇರೆ ಯಾವುದೇ ಪತ್ರಿಕೆ, ಪುಸ್ತಕ ಅಥವಾ ಅಂತರ್ಜಾಲದ ತಾಣಗಳಲ್ಲಿ ಪ್ರಕಟವಾಗಿರಬಾರದು.

  • ಮಕ್ಕಳು ಬರೆದ ಲೇಖನಗಳನ್ನೂ ಸ್ವೀಕರಿಸಲಾಗುತ್ತದೆ. ಲೇಖನದ ಜೊತೆಗೆ ವಯಸ್ಸನ್ನೂ ನಮೂದಿಸತಕ್ಕದ್ದು.

  • ಲೇಖನಗಳನ್ನು ’ಬರಹ’ ಅಥವಾ 'MS Word’ ತಂತ್ರಾಂಶವನ್ನು ಬಳಸಿ ಬರೆದಿರಬೇಕು.  ನಿಮ್ಮ ಕಥೆಗಳು ೨೦೦೦ ಪದಗಳನ್ನು ಮೀರದಂತಿರಬೇಕು.

  • ಸ್ವೀಕೃತವಾದ ಲೇಖನಗಳನ್ನು ಪ್ರಕಟಿಸುವಲ್ಲಿ ಸ್ಮರಣಸಂಚಿಕೆ ತಂಡದವರ ನಿರ್ಧಾರವೇ ಅಂತಿಮ.

  • ನಿಮ್ಮ ಹೆಸರು, ವಿಳಾಸ, ಈ-ಮೇಲ್ ಐಡಿ, ಬಣ್ಣದ ಭಾವಚಿತ್ರ (High Resolution: For example 1200x1220 pixels) ಮತ್ತು ಸಂಕ್ಷಿಪ್ತ ಪರಿಚಯಗಳನ್ನು ಕಳುಹಿಸತಕ್ಕದ್ದು.

  • ನಿಮ್ಮ ಲೇಖನಗಳನ್ನು ಕಳುಹಿಸಲು ಕೊನೆಯ ದಿನಾಂಕ ಮತ್ತು ಈ-ಮೇಲ್ ವಿಳಾಸಗಳನ್ನು ಈ ಪ್ರಕಟಣೆಯ ಕೊನೆಯಲ್ಲಿ ನೀಡಲಾಗಿದೆ.

ಕಥೆ ಹಾಗು ಕವನ ಸ್ಪರ್ಧೆಗಳಿಗೆ ಆಹ್ವಾನ

ಕಥೆಗಾರರಿಗೆ ಹಾಗು ಕವಿಗಳಿಗೆ ಸಂತಸದ ಸುದ್ದಿ! ಅಕ್ಕ ಸ್ಮರಣಸಂಚಿಕೆ ತಂಡವು ನಡೆಸಲಿರುವ ಕಥೆ ಹಾಗು ಕವನ ಸ್ಪರ್ಧೆಗಳಿಗೆ ಕಥೆಗಳನ್ನು ಮತ್ತು ಕವನಗಳನ್ನು  ಆಹ್ವಾನಿಸುತ್ತಿದ್ದೇವೆ. ನಿಮ್ಮ ಕಥೆಗಳನ್ನು / ಕವನಗಳನ್ನು ವಿಶೇಷ ಆಸಕ್ತಿಯಿಂದ ಓದಿ ಬಹುಮಾನ ನೀಡಲು ತೀರ್ಪುಗಾರರು ಸಜ್ಜಾಗಿದ್ದಾರೆ. ಸ್ಪರ್ಧೆಯ ಈ ಕೆಳಕಂಡ ನಿಯಮಾವಳಿಗಳನ್ನು ಪಾಲಿಸತಕ್ಕದ್ದು :

  • ಸ್ಪರ್ಧೆಗೆ ಕಳುಹಿಸಲಿರುವ ಕಥೆಗಳಾಗಲಿ ಕವನಗಳಾಗಲಿ ಬೇರೆ ಯಾವುದೇ ಪತ್ರಿಕೆ, ಪುಸ್ತಕ ಅಥವಾ ಅಂತರ್ಜಾಲದ ತಾಣಗಳಲ್ಲಿ ಪ್ರಕಟವಾಗಿರಬಾರದು ಮತ್ತು ಅನುವಾದಿತ ಕೃತಿಗಳಾಗಿರಬಾರದು.

  • ’ಬರಹ’ ಅಥವಾ 'MS Word’ ತಂತ್ರಾಂಶವನ್ನು ಬಳಸಿ ಬರೆದಿರಬೇಕು.  ನಿಮ್ಮ ಕಥೆಗಳು ೨೦೦೦ ಪದಗಳನ್ನು ಮೀರದಂತಿರಬೇಕು.

  • ಸ್ಪರ್ಧೆಗೆ ಕಳುಹಿಸಲ್ಪಟ್ಟ ಕಥೆಗಳನ್ನು / ಕವನಗಳನ್ನು  ಪ್ರಕಟಿಸುವಲ್ಲಿ ಸ್ಮರಣಸಂಚಿಕೆ ತಂಡದವರ ನಿರ್ಧಾರವೇ ಅಂತಿಮ.

  • ನಿಮ್ಮ ಹೆಸರು, ವಿಳಾಸ, ಈ-ಮೇಲ್ ಐಡಿ, ಬಣ್ಣದ ಭಾವಚಿತ್ರ (High Resolution: For example 1200x1200 pixels) ಮತ್ತು ಸಂಕ್ಷಿಪ್ತ ಪರಿಚಯಗಳನ್ನು ಕಳುಹಿಸತಕ್ಕದ್ದು.

ಮುಖ್ಯ ವಿಷಯ:

ಸ್ಪರ್ಧೆಗೆ ಕಥೆಗಳನ್ನು/ಕವನಗಳನ್ನು ಈ-ಮೇಲ್ ಮೂಲಕ ಕಳುಹಿಸತಕ್ಕದ್ದು. ಈ-ಮೇಲ್‌ನ ವಿಷಯದಲ್ಲಿ (Subject) ’ಕಥಾಸ್ಪರ್ಧೆ’ ಅಥವ ’ಕವನ ಸ್ಪರ್ಧೆ’ ಎಂದು ಸ್ಪಷ್ಟವಾಗಿ ನಮೂದಿಸಿ ಜೊತೆಗೆ ಕಥೆಯ ಅಥವ ಕವನದ ಹೆಸರನ್ನು ಬರೆಯತಕ್ಕದ್ದು. ಹೀಗೆ ನಮೂದಿಸದೇ ಇರುವ ಕಥೆಗಳನ್ನಾಗಲಿ ಕವನಗಳನ್ನಾಗಲಿ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

ಉದಾ: ’ಕಥಾಸ್ಪರ್ಧೆ’ - (ತಾಯಿ)

ಉದಾ: ’ಕವನ ಸ್ಪರ್ಧೆ’ - (ಅಕ್ಕಿ ಆರಿಸುವಾಗ)

ಗಮನಿಸಿ:-

ಮೇಲೆ ಹೇಳಿದ ಯಾವುದೇ ಅಥವ ಎಲ್ಲ ವಿಭಾಗಗಳಿಗೆ, ನಿಮ್ಮ ಬರಹಗಳನ್ನು ಕಳುಹಿಸಿಕೊಡಲು ಕೊನೆಯ ದಿನಾಂಕ ಮೇ ೩೧, ೨೦೧೪. ನಿಮ್ಮ ಬರಹಗಳನ್ನು wkc2014_souvenir@akkaonline.com ಅಂತರ್ಜಾಲ ವಿಳಾಸಕ್ಕೆ ಈ-ಮೇಲ್ ಮಾಡತಕ್ಕದ್ದು.