×

Error message

  • Deprecated function: Methods with the same name as their class will not be constructors in a future version of PHP; nodequeue_queue has a deprecated constructor in include_once() (line 1105 of /home4/mipampao/public_html/akkaonline/2014/includes/bootstrap.inc).
  • Deprecated function: Unparenthesized `a ? b : c ? d : e` is deprecated. Use either `(a ? b : c) ? d : e` or `a ? b : (c ? d : e)` in include_once() (line 1105 of /home4/mipampao/public_html/akkaonline/2014/includes/bootstrap.inc).
  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3168 of /home4/mipampao/public_html/akkaonline/2014/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home4/mipampao/public_html/akkaonline/2014/sites/all/modules/ctools/ctools.module).
  • Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
  • Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
  • Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
  • Deprecated function: The each() function is deprecated. This message will be suppressed on further calls in _menu_load_objects() (line 569 of /home4/mipampao/public_html/akkaonline/2014/includes/menu.inc).
  • Deprecated function: implode(): Passing glue string after array is deprecated. Swap the parameters in drupal_get_feeds() (line 394 of /home4/mipampao/public_html/akkaonline/2014/includes/common.inc).

Co-Convener - Ravi Shankar


ಕನ್ನಡ        English

ಕನ್ನಡ ಮಿತ್ರರಿಗೆ ನಮಸ್ಕಾರ,

ಬರುವ ಇದೇ ಆಗಷ್ಟ್ 29, 30, 31, 2014 ರಂದು, ಸ್ಯಾನ್ ಹೋಸೆ ನಗರದಲ್ಲಿ, ನಡೆಯಲಿರುವ ಎಂಟನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಮಹತ್ತರ ಜವಾಬ್ದಾರಿಯನ್ನು ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ(KKNC), ಹೊತ್ತಿದೆ. ಈ ವಿಶೇಷ ಸಮಾರಂಭಕ್ಕೆ ನಿಮ್ಮೆಲ್ಲರನ್ನು ಆಹ್ವಾನಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ. ಸ್ಯಾನ್ ಫ್ರಾನ್ಸಿಸ್ಕೋ ಅದ್ಭುತವಾದ ಅನೇಕ ಪ್ರವಾಸಿ ತಾಣಗಳ ಆಗರ. ಸುಮಾರು 4000 ಕ್ಕೂ ಹೆಚ್ಚು ಕನ್ನಡಿಗರು ಈ ಮಹಾ ಸಮಾವೇಶದಲ್ಲಿ ಭಾಗವಹಿಸಬಹುದೆಂದು ನಿರೀಕ್ಷಿಸಲಾಗುತ್ತಿದೆ. ಅಕ್ಕ ಸಂಚಾಲಕ ಸಮಿತಿ, ಸಹ ಸಮಿತಿಗಳು ಹಾಗು ನಮ್ಮ ಉತ್ಸಾಹಿ ಸ್ವಯಂ ಸೇವಕರು ಈ ಸಮ್ಮೇಳನದ ಸಫಲತೆಗಾಗಿ, ಈ ಸಮ್ಮೇಳನವನನ್ನು ಅತ್ಯಂತ ಯಶಸ್ವಿಯನ್ನಾಗಿ ಮಾಡಲು ಕಂಕಣಬದ್ಧರಾಗಿ, ಆ ದಿಶೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಮೂರು ದಿನಗಳ ಅಧಿವೇಶನದಲ್ಲಿ, ನಮ್ಮ ಸಂಪದ್ಭರಿತವಾದ ಕಲೆ, ಸಂಸ್ಕೃತಿ ಹಾಗು ಭಾಷೆಯನ್ನು ಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಕರ್ನಾಟಕದ ಪ್ರಖ್ಯಾತ ವ್ಯಕ್ತಿಗಳು, ಕನ್ನಡ ಕವಿಗಳು, ಬರಹಗಾರರು ಮತ್ತು ಮನೋರಂಜಕರು ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನೃತ್ಯ, ನಾಟಕ, ಸಂಗೀತ, ಸಾಹಿತ್ಯ ಗೋಷ್ಟಿ, ಯುವಕರಿಗಾಗಿ ಕಾರ್ಯಕ್ರಮಗಳು ಹಾಗು ಸಮಕಾಲೀನ ಕನ್ನಡ ಮನೋರಂಜನ ಕಾರ್ಯಕ್ರಮಗಳನ್ನೊಳಗೊಂಡಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ನಮ್ಮದು. ಅಷ್ಟೇ ಅಲ್ಲದೆ, ಕಾರ್ಯಾಗಾರಗಳು,ವಿಚಾರಗೋಷ್ಠಿಗಳು, ಪ್ರದರ್ಶನಗಳು, ವ್ಯಾಪಾರ ಸಭೆಗಳು, ಉದ್ಯಮಿಗಳಿಗಾಗಿ ನೆಟ್ವರ್ಕಿಂಗ್, ವೈದ್ಯಕೀಯ ಶಿಕ್ಷಣ ಮುಂದುವರಿಕೆಗಾಗಿ ಮಾಹಿತಿ , ಹಳೆಯ ವಿದ್ಯಾರ್ಥಿಗಳ ಸಭೆ ಮುಂತಾದ ಅನೇಕ ಚಟುವಟಿಕೆಗಳನ್ನು ಈ ಸಮ್ಮೇಳನದಲ್ಲಿ ಅಳವಡಿಸಲಾಗಿದೆ. ಸಮ್ಮೇಳನದ ಧ್ಯೇಯ ವಾಕ್ಯದಂತೆ ("ಸಾಧನೆ, ಸಂಭ್ರಮ,ಸಂಕಲ್ಪ") ಎಲ್ಲಾ ಕನ್ನಡಿಗರ ಸಾಧನೆಯನ್ನು ಗುರುತಿಸಿ, ಈ ಸಂದರ್ಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಭರ್ಜರಿ ಹಾಗು ಪ್ರಸಿದ್ದವಾದ ಕರ್ನಾಟಕದ ಊಟದ ರುಚಿ ಸಹ ಸಮಾರಂಭದಲ್ಲಿ ಸವಿಯಬಹುದಾಗಿದೆ.

ಅಮೆರಿಕನ್ನಡಿಗ ಮಕ್ಕಳು ಮತ್ತು ಯುವಕರನ್ನು ಒಂದೇ ಚಾವಡಿಯಡಿ ಸೇರಿಸಿ, ಅವರನ್ನು ಒಗ್ಗೂಡಿಸಿ, ಅವರಲ್ಲಿ ಸ್ನೇಹ, ಸಂಪರ್ಕಗಳೇರ್ಪಡುವಂತೆ ಪ್ರೋತ್ಸಾಹಿಸುವ ಕಾರ್ಯಕ್ರಮಗಳೆಡೆಗೆ ನಮ್ಮ ಪ್ರಾಮುಖ್ಯತೆ. ಈ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ, ನಿಮ್ಮ ಮಕ್ಕಳನ್ನು ಹುರಿದುಂಬಿಸಬೇಕೆಂದು ನಿಮ್ಮನ್ನು ವಿನಂತಿಸಿಕೊಳ್ಳುತ್ತೇನೆ.

2014 ರ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಸ್ಯಾನ್ ಹೋಸೆ ನಗರದ ಮೆಕೆನ್ರಿ ಸಭಾಂಗಣದಲ್ಲಿ ನಡೆಯಲಿದೆ. ಈ ಬೃಹತ್ ಸಭಾಂಗಣ ಪ್ರಪಂಚದಲ್ಲೇ ವಿಶಿಷ್ಟವಾದುದು. 5000 ಜನರನ್ನು ಒಟ್ಟಿಗೆ ಈ ಸಭಾಂಗಣದಲ್ಲಿ ಕುಳ್ಳಿರಿಸಬಹುದಾಗಿದೆ. ಕೊಠಡಿಗಳ ದರವನ್ನು ಕೂಡ $99 ಕ್ಕೆ(ಒಂದು ರಾತ್ರಿ) ಇಳಿಸಲಾಗಿದೆ.

ಆಸಕ್ತರು ಅಕ್ಕ ಸಮ್ಮೇಳನ ಹಾಗು ನೋಂದಾವಣಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಜಾಲತಾಣವನ್ನು www.akkaonline.org ಆಗಾಗ್ಗೆ ಸಂಪರ್ಕಿಸಬೇಕೆಂದು ನನ್ನ ವಿನಂತಿ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಚ್ಛಿಸುವವರಿಗಾಗಿ, ಕಾರ್ಯಾಗಾರಗಳು, ವಿಚಾರಗೋಷ್ಠಿಗಳು,ಪ್ರದರ್ಶನಗಳು, ವ್ಯಾಪಾರ ಸಭೆಗಳ ಬಗ್ಗೆ ಹೆಚ್ಚಿನ ಮಾಹಿತಿ ಈ ಜಾಲತಾಣದಲ್ಲಿ ಲಭ್ಯವಿದೆ.

ಉತ್ತರ ಅಮೇರಿಕ ಕನ್ನಡಿಗರೆಲ್ಲರ ಒಗ್ಗೂಡಿವಿಕೆಗಾಗಿ, ಕನ್ನಡ ಭಾಷೆ, ಕಲೆ, ಸಂಸ್ಕತಿ, ಸಾಹಿತ್ಯದ ಜ್ಯೋತಿಯನ್ನು ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸುವ ಮಹತ್ತರ ಕಾರ್ಯಕ್ಕಾಗಿ ನಾವೆಲ್ಲರೂ ಕೂಡಿ ಅಕ್ಕ - 2014 ಕಾರ್ಯಕಾರಿ ಸಮಿತಿಯೊಂದಿಗೆ ಒಂದು ದೊಡ್ಡ ಹೆಜ್ಜೆ ಇಡೋಣವೇ?

ವಿಶ್ವಾಸದೊಂದಿಗೆ,

ರವಿಶಂಕರ್

ಸಹ-ಸಂಚಾಲಕರು, ಎಂಟನೆಯ ಅಕ್ಕ ವಿಶ್ವ ಕನ್ನಡ ಸಮೇಳನ - 2014