×

Error message

  • Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
  • Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
  • Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
  • Deprecated function: The each() function is deprecated. This message will be suppressed on further calls in _menu_load_objects() (line 569 of /home4/mipampao/public_html/akkaonline/2014/includes/menu.inc).
  • Deprecated function: implode(): Passing glue string after array is deprecated. Swap the parameters in drupal_get_feeds() (line 394 of /home4/mipampao/public_html/akkaonline/2014/includes/common.inc).

ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಸಹಯೋಗದೊಂದಿಗೆ ಅಮೇರಿಕಾ ಕನ್ನಡ ಕೂಟಗಳ ಆಗರ (ಅಕ್ಕ) ೮ನೇ ವಿಶ್ವ ಕನ್ನಡ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಲು ಸಜ್ಜಾಗುತ್ತಿದೆ. ಈ ಸಮ್ಮೇಳನ ಅಂಗವಾಗಿ ಕನ್ನಡ ಸಾಹಿತ್ಯದ ಸಮೃದ್ಧಿ, ಉತ್ಕೃಷ್ಟತೆ ಮತ್ತು ವೈವಿಧ್ಯತೆಗಳನ್ನು ಪರಿಚಯಿಸಿ ಪ್ರದರ್ಶಿಸಲು ಸಾಹಿತ್ಯ ವೇದಿಕೆ ಸಿದ್ಧವಾಗುತ್ತಿದೆ. ಪ್ರಸ್ತುತ ಸಾಹಿತ್ಯ ವೇದಿಕೆಯ ಕಾರ್ಯ ಚಟುವಟಿಕೆಗಳು ಎರಡು ಆಯಾಮಗಳಲ್ಲಿ ನಡೆಯಿತ್ತಿವೆ.


ಸಮ್ಮೇಳನದ ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳು


ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ, ಈ ಕೆಳಕಂಡ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ:

ಅ. ಕನ್ನಡದ ಉದ್ದಾಮ ಸಾಹಿತಿಯೊಬ್ಬರನ್ನು ಸಮ್ಮೇಳನಕ್ಕೆ ಆಹ್ವಾನಿಸಿ, ಅವರಿಂದ ಒಂದು ಪ್ರಧಾನ ಭಾಷಣವನ್ನು ಪ್ರಸ್ತುತಪಡಿಸುವುದು.
ಬ. ಕನ್ನಡ ಸಾಹಿತ್ಯವನ್ನು ಆಧರಿಸಿದ, ಒಂದು ಜನಪ್ರಿಯ ಕಾರ್ಯಕ್ರಮವನ್ನು ಆಯೋಜಿಸುವುದು.
ಕ. ಇವುಗಳಲ್ಲದೆ, ಕನ್ನಡ ಸಾಹಿತ್ಯವನ್ನು ಪರಿಚಯಿಸುವಂತಹ ಅಥವಾ ಸಾಹಿತಿಗಳನ್ನು ಪ್ರೋತ್ಸಾಹಿಸುವಂತಹ ಇನ್ನಿತರ ಕಾರ್ಯಕ್ರಮಗಳನ್ನು ಸಹ ಆಯೋಜಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ.

(ನಿರ್ದಿಷ್ಟ, ನವೀನ ಮತ್ತು ಹೆಚ್ಚಿನ ವಿವರಗಳಿಗಾಗಿ, ಇಲ್ಲಿಗೆ ಮತ್ತೆ ಬನ್ನಿ!)

KAN101

Program Title: ಸ್ವಕೃತಿವಾಚನ
Program Directors: ವಿಶ್ವನಾಥ್ಹುಲಿಕಲ್ಮತ್ತುಕಾವ್ಯಭಟ್
Date: 08/29/2014 (ಶುಕ್ರವಾರ)
Time: 4:00 PM - 5:30 PM
Venue: ಚಂಪಕ
ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಹೊರಗಡೆ ನೆಲೆಸಿರುವ ಕನ್ನಡದ ಲೇಖಕ ಮತ್ತು ಲೇಖಕಿಯರು ತಮ್ಮ ಸಾಹಿತ್ಯಿಕ ಕೃತಿಗಳ ವಾಚನಮಾಡಲಿದ್ದಾರೆ. ಗದ್ಯ ಪ್ರಕಾರವನ್ನು ಮಂಡಿಸುವವರಿಗೆ ಏಳು ನಿಮಿಷ ಮತ್ತು ಪದ್ಯವನ್ನು ಓದುವವರಿಗೆ ಮೂರು ನಿಮಿಷ ಕಾಲಾವಕಾಶವಿರುತ್ತದೆ. ವಾಚನ ಮಾಡುವ ಇಂತಹ ಕೃತಿಗಳು, ಸಾಹಿತ್ಯದ ಯಾವುದೇ ಪ್ರಕಾರಕ್ಕಾದರೂ (ಸಣ್ಣಕಥೆ, ವಿಮರ್ಶೆ, ಹಾಸ್ಯಲೇಖನ, ಪ್ರಬಂಧ, ಕವನ, ಇತ್ಯಾದಿ) ಸೇರಿರಬಹುದು. ಕನ್ನಡದ ಜನಪ್ರಿಯ ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕರಾದ ಶ್ರೀ ನಾಗತಿಹಳ್ಳಿ ಚಂದ್ರಶೇಖರ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸುವ ನಿರೀಕ್ಷೆ ಇದೆ.

KAN102

Program Title: ಡಾ. ಎಸ್ .ಎಲ್. ಭೈರಪ್ಪನವರೊಡನೆ ಒಂದು ಸಾಹಿತ್ಯಿಕ ಸಂವಾದ
Program Director: ಪ್ರಕಾಶನಾಯಕ್
Date: 08/30/2014 (ಶನಿವಾರ)
Time: 5:30 PM - 7:00 PM
Venue: ಪಾರಿಜಾತ
ಈ ಸಾಹಿತ್ಯಿಕ ಚರ್ಚೆಯಲ್ಲಿ ಕನ್ನಡದ ಪ್ರಸಿದ್ಧ ಕಾದಂಬರಿಕಾರ ಡಾ. ಎಸ್. ಎಲ್. ಭೈರಪ್ಪನವರು ಭಾಗವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಭೈರಪ್ಪನವರ ಕೃತಿಗಳನ್ನು ಸಂಬಂಧಿಸಿದಂತೆ ನಿಮ್ಮ ಪ್ರಶ್ನೆಗಳಿಗೆ ಅವರಿಂದಲೇ ಉತ್ತರಗಳನ್ನು ಕೇಳುವ ಸುವರ್ಣಾವಕಾಶ. ಇತ್ತೀಚಿಗೆ ಬಿಡುಗಡೆಯಾಗಿರುವ ಅವರ ಕಾದಂಬರಿ "ಯಾನ"ದ ಅದ್ಭುತ ಯಶಸ್ಸಿನ ಸಂಭ್ರಮದಲ್ಲಿರುವ ಅವರೊಡನೆ ಮಾತನಾಡುವ ಸದವಕಾಶ.

  • ಡಾ. ಎಸ್. ಎಲ್. ಭೈರಪ್ಪನವರ ಹೊಸ ಕಾದಂಬರಿ ಆಗಸ್ಟನಲ್ಲಿ ಜಗತ್ತಿನ ಹಲವು ಭಾಗಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ, ಅಭೂತಪೂರ್ವ ಯಶಸ್ಸನ್ನು ಕಂಡಿದೆ.
  • ಡಾ. ಎಸ್. ಎಲ್. ಭೈರಪ್ಪನವರ ಕೃತಿಗಳು ಇಂಗ್ಲೀಷಿಗೆ ಮತ್ತು ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಕರ್ನಾಟಕದ ಹೊರಗೂ ಬಹು ಜನಪ್ರಿಯ ಕನ್ನಡಸಾಹಿತಿ ಇವರು.
  • ಇವರ ಮುಖ್ಯ ಪ್ರಶಸ್ತಿಗಳು – ಸರಸ್ವತೀ ಸಮ್ಮಾನ್ (ಮಂದ್ರ ಕೃತಿಗಾಗಿ - ೨೦೧೧), ನಾಡೋಜ ಪ್ರಶಸ್ತಿ (೨೦೧೧), ಪಂಪ ಪ್ರಶಸ್ತಿ (೨೦೦೫), ಇತ್ಯಾದಿ.

KAN103

Program Title: Heritage Quiz presented by PurePrayer.com
Program Directors: ಗಣೇಶ್ಕಡಬ ಮತ್ತು ಪ್ರತಾಪ್ಸಿಂಹ
Grand Finals
Quiz-Master: ಪ್ರತಾಪ್ಸಿಂಹ
Date: 08/30/2014 (ಶನಿವಾರ)
Time: 11:00 AM - 12:30 PM
Venue: ಪಾರಿಜಾತ
ಕನ್ನಡ – ಕರ್ನಾಟಕದ ಬಗೆಗಿನ ಪಾಂಡಿತ್ಯವನ್ನು ಪ್ರದರ್ಶಿಸಲು ೨೦೧೪ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ Pureprayer.com Heritage Quiz ಸರಿಯಾದ ವೇದಿಕೆ! ರಸಪ್ರಶ್ನೆಯಲ್ಲಿ ಇತಿಹಾಸ, ಸಿನಿಮಾ, ಹಾಡು, ಸಾಹಿತ್ಯ ಮುಂತಾದ ಪ್ರಕಾರಗಳಿದ್ದು ಮನರಂಜಕವಾಗಿರುತ್ತದೆ. ಅಕ್ಕ ಸಾಹಿತ್ಯಿಕ ಸಮಿತಿಯವತಿಯಿಂದ ಜರುಗಲಿರುವ ಈ ಕಾರ್ಯಕ್ರಮವನ್ನು Pureprayer.com ಪ್ರಸ್ತುತ ಪಡಿಸಿರುತ್ತಾರೆ ಹಾಗು ಅತ್ಯಾಕರ್ಷಕ ಬಹುಮಾನಗಳನ್ನು ಕೊಡುತ್ತಾರೆ!
ಪೂರ್ವ ಸಿದ್ಧತಾ ಹಂತದಲ್ಲಿ ವಿಜಯಿಗಳಾದ ಮೊದಲ ಆರು ಭಾಗಿಗಳು ಸಮ್ಮೇಳನದಂದು ವೇದಿಕೆಯ ಮೇಲೆ ಅಂತಿಮ ಹಂತದಲ್ಲಿ ಭಾಗವಹಿಸುತ್ತಾರೆ. ಪೂರ್ವ ಸಿದ್ಧತಾ ಹಂತದ ವಿಜೇತರು ತಮ್ಮ ಜೊತೆಗೆ ಮತ್ತೊಬ್ಬ ಸ್ಪರ್ಧಿಯನ್ನು ಕರೆತರಬಹುದು. ಅವರೂ ಅಕ್ಕ ಸಮ್ಮೇಳನದಲ್ಲಿ ನೋಂದಣಿಯಾಗಿರಬೇಕು. ವೇದಿಕೆಯ ಮೇಲೆ ನಡೆಯುವ ಅಂತಿಮ ಹಂತ ಕನ್ನಡದಲ್ಲಿರುತ್ತದೆ.

KAN104

Program Title: ಬೇಂದ್ರೆಯವರ ಸಾಹಿತ್ಯದ ವೈಶಿಷ್ಠ್ಯಗಳು
Program Director: ರಾಮಪ್ರಸಾದ್ಕೆ.ವಿ.
Date: 08/31/2014 (ಭಾನುವಾರ)
Time: 2:00 PM -3:00 PM
Venue: ಕಣಗಲೆ
ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಕನ್ನಡ ಮತ್ತು ಸಂಸ್ಕೃತಗಳೆರಡರಲ್ಲೂ ಉದ್ದಾಮ ಪಂಡಿತರು ಹಾಗೂ ಶ್ರೇಷ್ಠವಾಗ್ಮಿಗಳು; ಕನ್ನಡ ಸಾಹಿತ್ಯ ಮತ್ತು ಅಧ್ಯಾತ್ಮದಲ್ಲಿ ಆಳವಾದ ಅಧ್ಯಯನ ಮಾಡಿದ್ದಾರೆ. ಶ್ರೀಯುತರು ಬೇಂದ್ರೆಯವರ ಸಾಹಿತ್ಯದ ವೈಶಿಷ್ಠ್ಯಗಳನ್ನು ಸ್ವಾರಸ್ಯವಾಗಿ ಪ್ರಸ್ತುತಪಡಿಸಲಿದ್ದಾರೆ. ಈ ಉಪನ್ಯಾಸದಲ್ಲಿ ತಾವು ಭಾಗವಹಿಸಿ! ಕಾರ್ಯಕ್ರಮದ ಕೊನೆಯ ಭಾಗದಲ್ಲಿ, ತಮ್ಮ ಪ್ರಶ್ನೆಗಳನ್ನು ಕೇಳುವ ಅವಕಾಶ ಸಹ ಇರುತ್ತದೆ.

KAN105

Program Title: ಭಾವಧಾರೆ
Program Director: ರವಿ ಗೋಪಾಲರಾವ್
Date: 08/31/2014 (ಭಾನುವಾರ)
Time: 11:00 AM - 12:30 PM
Venue: ಕಣಗಲೆ
ಪ್ರೊ.ಕೃಷ್ಣೇಗೌಡರು ನೆಡಸಿಕೊಡುವ “ಭಾವಧಾರೆ” ಸಾಹಿತ್ಯ ಹಾಗೂ ಸಂಗೀತಗಳ ಸಮ್ಮಿಲನ. ಪ್ರೊ. ಕೃಷ್ಣೇಗೌಡರು ಒಬ್ಬ ಉಪನ್ಯಾಸಕರು, ಕಲಾವಿದರು, ವಿಮರ್ಶಕರು, ಜಾನಪದ ಸಾಹಿತ್ಯದಲ್ಲಿ ಪರಿಣಿತರು. ಇವರ ಮಾತಲ್ಲಿ ಹಾಸ್ಯವಿದೆ, ಲಾಸ್ಯವಿದೆ, ಗಾದೆಯಿದೆ, ಹಳ್ಳಿಭಾಷೆಯ ಸೊಗಡಿದೆ. “ಮುಖದ ಮೇಲೆ ಮಂದಹಾಸವಿದ್ರೆ, ಎಲ್ಲರೂ ಸುಂದರರೇ” ಎಂದು ಹೇಳಿ ನಮ್ಮನ್ನು ನಗಿಸುವುದಲ್ಲದೆ ನಮ್ಮ ದಿನನಿತ್ಯ ಜೀವನಕ್ಕೆ ಒಂದು ಚಿಂತನಾತ್ಮಕ ದೃಷ್ಟಿ ಬೀರಲು ಅಣಿಮಾಡಿಕೊಟ್ಟ ಪ್ರೊ.ಕೃಷ್ಣೇಗೌಡರು ಅಕ್ಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬನ್ನಿ ನಾವೆಲ್ಲ ಅವರು ನೆಡಸಿಕೊಡುವ “ಭಾವಧಾರೆ” ಕಾರ್ಯಕ್ರಮ ಕೇಳಿ ಆನಂದಿಸೋಣ. ಕಾರ್ಯಕ್ರಮದ ಕೊನೆಯಲ್ಲಿ ನಿಮ್ಮ ಚಿಂತನ ಶೀಲ ಪ್ರಶ್ನೆಗಳನ್ನು ಕೇಳಲು ಇದೊಂದು ಸದಾವಕಾಶ!


ಪುಸ್ತಕ ಪ್ರಕಾಶನ

೨೦೧೪ ರ ವಿಶ್ವ ಕನ್ನಡ ಸಮ್ಮೇಳನದಲ್ಲಿ ಎರಡು ಸಾಹಿತ್ಯಿಕ ಕೃತಿಗಳನ್ನು ರಚಿಸಿ, ಪ್ರಕಟಿಸಲು ಸಾಹಿತ್ಯ ವೇದಿಕೆ ಮುಂದಾಗಿದೆ. ಕನ್ನಡದ ಜನಪ್ರಿಯ ಪ್ರಕಾರಗಳನ್ನು ಹೊಸ ಸೊಗಡಿನೊಂದಿಗೆ ಸಾಹಿತ್ಯಾಸಕ್ತರ ಕೈಯಲ್ಲಿರಿಸುವುದೇ ಇದರ ಉದ್ದೇಶ. ಸಾಹಿತ್ಯ ರಸಿಕರು ಇವುಗಳನ್ನು ಓದಿ, ಆ ನೆನಪುಗಳನ್ನು ತಮ್ಮ ಚಿರಸ್ಮರಣೀಯ ನೆನಪುಗಳ ಭಂಡಾರದಲ್ಲಿ ಕಾಪಾಡಬೇಕೆಂಬುದು ನಮ್ಮ ಆಶಯ. ಹೀಗಾಗಿ ನಾವು ಈ ಕೆಳಕಂಡ ಎರಡು ಪ್ರಕಾರಗಳನ್ನು ಅಯ್ಕೆ ಮಾಡಿಕೊಂಡಿದ್ದೇವೆ.

ಅ. ಸಣ್ಣ ಕಥಾ ಸಂಕಲನ

ಕನ್ನಡದ ಸಮಕಾಲೀನ ಶ್ರೇಷ್ಠ ಕಥೆಗಾರರನ್ನು ಆಹ್ವಾನಿಸಿ, ಅವರುಗಳಿಂದ ಒಂದೊಂದು ಸಣ್ಣ ಕಥೆಯನ್ನು ಬರೆಯುವಂತೆ ಈಗಾಗಲೇ ವಿನಂತಿಸಿಕೊಂಡಿದ್ದೇವೆ. ಅವರುಗಳು ತಮ್ಮ ಕಥೆಗಳನ್ನು ನಮಗೆ ಸಲ್ಲಿಸಿದ ನಂತರ, ನಮ್ಮ ಸಾಹಿತ್ಯಿಕ ಸಮಿತಿಯ ಸಂಪಾದಕ ಮಂಡಳಿ ಅವುಗಳನ್ನು ಪರಿಷ್ಕರಿಸಿ, ಒಂದು ಸಣ್ಣ ಕಥಾ ಸಂಕಲನವನ್ನು ಸಿದ್ಧಗೊಳಿಸಿ, ಸಮ್ಮೇಳನದಲ್ಲಿ ಬಿಡುಗಡೆ ಮಾಡಲು ಆಯೋಜಿಸಲಾಗಿದೆ.

ಬ. ಲಲಿತ ಪ್ರಬಂಧ ಸಂಪುಟ

ಪ್ರಸ್ತುತ ಕನ್ನಡದ ಸಮಕಾಲೀನ ಶ್ರೇಷ್ಠ ಪ್ರಬಂಧಕಾರರನ್ನು ಗುರುತಿಸಿ, ಅವರುಗಳಿಂದ ಲಲಿತ ಪ್ರಬಂಧ (ಅಥವಾ ಹರಟೆ) ಲೇಖನವನ್ನು ನಮಗೆ ರಚಿಸಿ ಕೊಡಬೇಕೆಂದು ಈಗಾಗಲೇ ಪ್ರಾರ್ಥಿಸಿಕೊಂಡಿದ್ದೇವೆ. ಅವರುಗಳಿಂದ ಸಲ್ಲಿಸಲ್ಪಟ್ಟ ಲೇಖನಗಳನ್ನು ಒಟ್ಟುಗೂಡಿಸಿ, ಒಂದು ಲಲಿತ ಪ್ರಬಂಧ ಸಂಪುಟವನ್ನು ರಚಿಸಲಾಗುವುದು. ಈ ಪುಸ್ತಕವನ್ನು ಮುದ್ರಿಸಿ, ಅದನ್ನೂ ಸಹ ಸಮ್ಮೇಳನದಲ್ಲಿ ಲೋಕಾರ್ಪಣೆ ಮಾಡಲಾಗುವುದು.


ಸಮಿತಿಯ ಸದಸ್ಯರು

ವಿಶೇಷ ಸಮಿತಿ

ನರೇಂದ್ರ ಕುನ್ಹೋಡಿ (ಅಧ್ಯಕ್ಷರು)

ವಸುಧಾ ಹೆಗಡೆ (ಸಹ ಅಧ್ಯಕ್ಷರು)

ಸಾಹಿತ್ಯಿಕ ವೇದಿಕೆ

ವಿಶ್ವನಾಥ್ ಹುಲಿಕಲ್ (ನಾಯಕರು)

ಪ್ರಕಾಶ ನಾಯಕ (ಸಹ ನಾಯಕರು)

ಕೆ.ವಿ.ರಾಮಪ್ರಸಾದ್

ಡಾII ರವಿ ಗೋಪಾಲರಾವ್

ಪ್ರತಾಪ್ ಸಿಂಹ

ಕಾವ್ಯ ಭಟ್

ಗಣೇಶ್ ಕಡಬ