|
Quick Links |
AKKA ಸಂಚಾಲಕರ ಸಂದೇಶ
ಆತ್ಮೀಯ ಕನ್ನಡಿಗರೇ:
ಅಟ್ಲಾಂಟ ಮಹಾನಗರದಲ್ಲಿ ೭ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ದಿನಾಂಕ ಆಗಸ್ಟ್ 31, ಸೆಪ್ಟೆಂಬರ್ 1, 2. 2012 ರಂದು, ನೃಪತುಂಗ ಕನ್ನಡ ಕೂಟದ ಆಶ್ರಯದಲ್ಲಿ ಆಚರಿಸಲು ಸಿದ್ಧತೆಗಳು ಭರದಿಂದ ಪ್ರಾರಂಭವಾಗಿದೆ. ಈ ಬೃಹತ್ ಸಮಾರಂಭದಲ್ಲಿ ವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ವ್ಯಾವಹಾರಿಕ, ವಾಣಿಜ್ಯ, ಸಾಹಿತ್ಯ, ವೈದ್ಯಕೀಯ ಮತ್ತು ಆಧ್ಯಾತ್ಮಿಕ ವಿಷಯಗಳ ವಿಚಾರವಾಗಿ ಉಪನ್ಯಾಸಗಳನ್ನು ಏರ್ಪಡಿಸಲಾಗುವುದು. ಮಕ್ಕಳಿಗೆ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಕಾರ್ಯಕ್ರಮಗಳನ್ನು ಸಹ ಯೋಜಿಸಲಾಗುವುದು. ಮೆರವಣಿಗೆ, ಪ್ರತಿಭಾ ಪ್ರದರ್ಶನ ಮತ್ತು ಸ್ಪರ್ಧೆಗಳನ್ನು ನಡೆಸುವ ಯೋಜನೆ ಇದೆ. ವಿವಿಧ ವಸ್ತುಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶಗಳಿದೆ.
ಕರ್ನಾಟಕದ ಕಲಾವಿದರನ್ನು, ಗಣ್ಯವ್ಯಕ್ತಿಗಳನ್ನು ಈ ಸಮಾರಂಭದಲ್ಲಿ ಭಾಗವಹಿಸಲು ಆಮಂತ್ರಣ ನೀಡಲಿದ್ದೇವೆ. ವಿವಿಧ ಕನ್ನಡ ಕೂಟಗಳಿಗೂ ಸಹ ಆಹ್ವಾನ ನೀಡಲಿದ್ದೇವೆ. ಇದೇ ಸಂದರ್ಭದಲ್ಲಿ ಒಂದು ಸ್ಮರಣಸಂಚಿಕೆಯನ್ನು ಪ್ರಕಟಿಸಲಾಗುವುದು.
ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗೆ ಊಟ, ವಸತಿ ಸೌಕರ್ಯಗಳನ್ನು ಏರ್ಪಾಡು ಮಾಡಲಾಗುವುದು. ಕರ್ನಾಟಕದ
ಕಲೆ-
ಇಂತಹ ಮಹತ್ತರವಾದ ಕಾರ್ಯಕ್ರಮವನ್ನು ಏರ್ಪಡಿಸಲು ಜನ ಮತ್ತು ಧನ ಸಹಾಯ ಅತ್ಯಗತ್ಯ.ಈಗಾಗಲೇ ಅನೇಕ ಕನ್ನಡ ಪ್ರೇಮಿಗಳು ಅವರ ಕೈಲಾದ ಸೇವೆ ಸಲ್ಲಿಸಲು ಮುಂದೆ ಬಂದಿದ್ದಾರೆ. ಅವರ ವಿಶಾಲ ಮನೋಭಾವ ಮತ್ತು ಉತ್ಸಾಹಕ್ಕೆ ನಮ್ಮ ಧನ್ಯವಾದಗಳು.
ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ನಿಮ್ಮ ಸಹಕಾರ ಮತ್ತು ಪ್ರೋತ್ಸಾಹ ಅತ್ಯವಶ್ಯ. ನೀವು ದಯಮಾಡಿ ನಮ್ಮೂರಿಗೆ ಬನ್ನಿ ಮತ್ತು ನಿಮ್ಮನ್ನು ಸತ್ಕರಿಸಲು ನಮಗೆ ಅವಕಾಶ ನೀಡಿ. ನಿಮ್ಮೆಲ್ಲ ಗೆಳೆಯರಿಗೆ ಹಾಗೂ ಬಂಧುಗಳಿಗೆ ತಿಳಿಸಿ. ಆದಷ್ಟು ಬೇಗ ಕಾರ್ಯಕ್ರಮಕ್ಕೆ ನೋಂದಣಿ ಮಾಡಿ. ಲೇಖನಗಳನ್ನು ಬರೆದು ಕಳಿಸಿ, ಜಾಹೀರಾತು ಕೊಡಿ ಮತ್ತು ಕೈಲಾದ ಧನ ಸಹಾಯ ಮಾಡಿ.
ಹೆಚ್ಚಿನ ವಿಚಾರಕ್ಕೆ ಸಂಕೋಚವಿಲ್ಲದೆ ನಮ್ಮನ್ನು ಸಂಪರ್ಕಿಸಿ, ನಮ್ಮ ಅಂತರ್ಜಾಲ ತಾಣಗಳನ್ನೂ ನೋಡಿ .
web: http://www.akkaonline.org/2012/
ಡಾ|| ಹೊ.ನಾ. ರಾಮಸ್ವಾಮಿ
ದೂರವಾಣಿ : 770-